User:Prashanth J Achar/sandbox

From Wikipedia, the free encyclopedia


ಎಲಿಜಬೆತ್ ಬ್ಲ್ಯಾಕ್ವೆಲ್ ಎಂ. ಡಿ.
Born(೧೮೨೧-Expression error: Unrecognized punctuation character "೦".-೦೩)Expression error: Unrecognized punctuation character "೦". Expression error: Unrecognized punctuation character "೧".Expression error: Unrecognized punctuation character "೧".Expression error: Unrecognized punctuation character "೦".Expression error: Unrecognized punctuation character "೦".
ಬ್ರಿಸ್ಟಲ್ ಇಂಗ್ಲೆಂಡ್
Died31 May 1910(1910-05-31) (aged 89)
Hastings, Sussex, England
NationalityBritish
CitizenshipBritish and American
Alma materGeneva Medical College
Occupation


ಎಲಿಜಬೆತ್ ಬ್ಲ್ಯಾಕ್ವೆಲ್ (೩ ಫೆಬ್ರುವರಿ ೧೮೨೧ - ೩೧ ಮೇ ೧೯೧೦) ಬ್ರಿಟಿಷ್ ವೈದ್ಯರು, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವೈದ್ಯಕೀಯ ಪದವಿ ಪಡೆದ ಮೊದಲ ಮಹಿಳೆ ಮತ್ತು ಮೆಡಿಕಲ್ ಕೌನ್ಸಿಲ್ ನಲ್ಲಿ ದಾಖಲೆಯಾದ ಮೊದಲ ಮಹಿಳೆಯಾಗಿದ್ದಾರೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಮಹಿಳೆಯರನ್ನು ಉತ್ತೇಜಿಸುವ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಯುನೈಟೆಡ್ ಕಿಂಗಡಂಮ್ ನಲ್ಲಿ ಸಾಮಾಜಿಕ ಮತ್ತು ನೈತಿಕ ಸುಧಾರಣಾಧಿಕಾರಿಗಳ ಪ್ರವರ್ತಕರಾಗಿದ್ದರು. ವೈದ್ಯಕೀಯ ಪ್ರಪಂಚಕ್ಕೆ ಕೊಡುಗೆ ಕಾರಣದಿಂದ, ಫೆಬ್ರವರಿ 3 ಮಹಿಳಾ ವೈದ್ಯರ ದಿನ ಎಂದ್ತು ಆಚರಿಸಲಾಗುತಾದೆ ಮತ್ತು ರಾಷ್ಟ್ರೀಯ ರಜೆ ಹೊಂದಿದೆ. ಅವರ ಸಹೋದರಿ ಎಮಿಲಿ ಅಮೆರಿಕದಲ್ಲಿ ವೈದ್ಯಕೀಯ ಪದವಿಯನ್ನು ಪಡೆಯುವ ಮೂರನೆಯ ಮಹಿಳೆಯಾಗಿದದ್ದಾರೆ.


ಆರಂಭಿಕ ಜೀವನ ಎಲಿಜಬೆತ್ ಫೆಬ್ರವರಿ 3, 1821 ರಂದು ಇಂಗ್ಲಂಡ್ನ ಬ್ರಿಸ್ಟಲ್ ನಲ್ಲಿ, ಸ್ಯಾಮ್ಯುಯೆಲ್ ಬ್ಲ್ಯಾಕ್ವೆಲ್ ಮತ್ತು ಅವರ ಪತ್ನಿ ಹನ್ನಾ (ಲೇನ್) ಬ್ಲ್ಯಾಕ್ವೆಲಾರಿಗೆ ಜನಿಸಿದರು. ಆಕೆಯು ಅನ್ನಾ, ಮರಿಯನ್ ಎಂಬ ಹಿರಿಯ ಮತ್ತು ಆರು ಕಿರಿಯ ಸಹೋದರರನ್ನು ಹೊಂದಿದ್ದರು. ಬ್ಲ್ಯಾಕ್ವೆಲ್ ಅವರು ಆರಂಭಿಕ ದಿನಗಳಲಿ ಬ್ರಿಸ್ಟಲ್ ನ ಪೋರ್ಟ್ಲ್ಯಾಂಡ್ ಸ್ಕ್ವೇರ್ನ 1 ವಿಲ್ಸನ್ ರಸ್ತೆಯ ಮನೆಯಲ್ಲಿ ವಾಸಿಸುತ್ತಿದ್ದರು[1]. ವಿಲ್ಸನ್ ಸ್ಟ್ರೀಟ್ ನಲ್ಲಿನ ಅವರ ಬಾಲ್ಯವು ಸಂತೋಷದಾಯಕವಾಗಿತ್ತು. ಬ್ಲ್ಯಾಕ್ವೆಲ್ ವಿಶೇಷವಾಗಿ ತನ್ನ ತಂದೆಯ ಧನಾತ್ಮಕ ಮತ್ತು ಪ್ರೀತಿಯ ಪ್ರಭಾವವನ್ನು ಪಡೆದಿದ್ದರು. ಸ್ಯಾಮ್ಯುಯೆಲ್ ಮತ್ತು ಹನ್ನಾ ಬ್ಲ್ಯಾಕ್ವೆಲ್ ಮಕ್ಕಳ ಪಾಲನೆಗೆ ಮಾತ್ರವಲ್ಲ, ಧರ್ಮ ಮತ್ತು ಸಾಮಾಜಿಕ ಸಿದ್ಧಾಂತಗಳ ಬಗ್ಗೆ ಒಲವು ಹೊಂದಿದರು. ಬ್ಲ್ಯಾಕ್ವೆಲ್ ಅವರ ತಂದೆಯು ಅವರ ಮಕ್ಕಳ ಶಿಕ್ಷಣದ ಬಗೆಗಿನ ಅವರ ಮನೋಭಾವದಲ್ಲಿ ಇದೇ ರೀತಿಯ ಉದಾರವಾದಿ. ಸ್ಯಾಮ್ಯುಯೆಲ್ ಬ್ಲ್ಯಾಕ್ವೆಲ್ ಅವರು ಮಕ್ಕಳ ಧಾರ್ಮಿಕ ಮತ್ತು ಶೈಕ್ಷಣಿಕ ಶಿಕ್ಷಣದ ಮೇಲೆ ಬಲವಾದ ಪ್ರಭಾವ ಬೀರಿದರು. ತಮ್ಮ ಮಕ್ಕಳನ್ನು ಒಳಗೊಂಡಂತೆ ಪ್ರತಿ ಮಗುವಿಗೆ ಅವರ ಪ್ರತಿಭೆಯ ಅನಿಯಮಿತ ಬೆಳವಣಿಗೆಗೆ ಅವಕಾಶ ನೀಡಬೇಕೆಂದು ಅವರು ನಂಬಿದ್ದರು. ಬ್ಲ್ಯಾಕ್ವೆಲ್ ಕುಟುಂಬವು 1832 ರಲ್ಲಿ ಇಂಗ್ಲೆಂಡ್ ನಿಂದ ನ್ಯೂಯಾರ್ಕ್ ನಗರಕ್ಕೆ ಸ್ಥಳಾಂತರಗೊಂಡಿತು ಮತ್ತೆ ಆರು ವರ್ಷಗಳ ನಂತರ ಓಹಿಯೋದ ಸಿನ್ಸಿನಾಟಿಗೆ ಸ್ಥಳಾಂತರಗೊಂಡಿತು[2]

ಬ್ಲ್ಯಾಕ್ವೆಲ್ ಆರ್ಥಿಕ ಪರಿಸ್ಥಿತಿಯು ದುರದೃಷ್ಟಕರವಾಗಿತ್ತು. ಹಣಕಾಸಿನ ಅಗತ್ಯತೆಯಿಂದ, ಸಹೋದರಿಯರಾದ ಅನ್ನಾ, ಮರಿಯನ್ ಮತ್ತು ಎಲಿಜಬೆತ್, ಸಿನ್ಸಿನಾಟಿಯಲ್ಲಿ ಇಂಗ್ಲಿಷ್ ಮತ್ತು ಫ್ರೆಂಚ್ ಅಕಾಡೆಮಿ ಫಾರ್ ಯಂಗ್ ಲೇಡೀಸ್ ಅನ್ನು ಪ್ರಾರಂಭಿಸಿದರು. ಇದು ಕೇವಲ ಬ್ಲ್ಯಾಕ್ವೆಲ್ ಸಹೋದರಿಯರಿಗೆ ಆದಾಯದ ಮೂಲವಾಯಿತು. ಸಿನ್ಸಿನ್ನಾಟಿ ಸಮುದಾಯದ ಸಂಪ್ರದಾಯವಾದಿ ಪರಿಣಾಮವಾಗಿ, ಅಕಾಡೆಮಿ ಅನೇಕ ವಿದ್ಯಾರ್ಥಿಗಳನ್ನು ಕಳೆದುಕೊಂಡು 1842 ರಲ್ಲಿ ಮುಚಿತು. ಬ್ಲ್ಯಾಕ್ವೆಲ್ ೧೮೪೨ರಿಂದ ಖಾಸಗಿ ವಿದ್ಯಾರ್ಥಿಗಳಿಗೆ ಬೋಧನೆಮಡಲಾರಂಬಿಸಿದರು[3].

ಚಾನ್ನಿಂಗ್ ಆಗಮನವು ಶಿಕ್ಷಣ ಮತ್ತು ಸುಧಾರಣೆಯಲ್ಲಿ ಬ್ಲ್ಯಾಕ್ವೆಲರ ಆಸಕ್ತಿಗಳನ್ನು ನವೀಕರಿಸಿತು. ಅವರು ಬೌದ್ಧಿಕ ಸ್ವಯಂ ಸುಧಾರಣೆಯಲ್ಲಿ ಕೆಲಸ ಮಾಡಿದರು: ಕಲೆ ಅಧ್ಯಯನ, ವಿವಿಧ ಉಪನ್ಯಾಸಗಳಿಗೆ ಹಾಜರಾಗುವುದು, ಸಣ್ಣ ಕಥೆಗಳನ್ನು ಬರೆಯುವುದು ಮತ್ತು ಎಲ್ಲಾ ಧಾರ್ಮಿಕ ಸೇವೆಗಳಲ್ಲಿ (ಕ್ವೇಕರ್, ಮಿಲ್ಲರೈಟ್, ಯೆಹೂದಿ) ಹಾಜುರಾಗುತಿದ್ದರು. 1840 ರ ದಶಕದ ಆರಂಭದಲ್ಲಿ, ಅವರು ತಮ್ಮ ಡೈರೀಗಳಲಿ ಮಹಿಳಾ ಹಕ್ಕುಗಳ ಬಗ್ಗೆ ಆಲೋಚನೆಗಳನ್ನು ಬರೆಯಲು ಪ್ರಾರಂಭಿಸಿದರು ಮತ್ತು 1840 ರ ಹ್ಯಾರಿಸನ್ ರಾಜಕೀಯ ಪ್ರಚಾರದಲ್ಲಿ ಪಾಲ್ಗೊಂಡರು [4].

1844 ರಲ್ಲಿ, ತನ್ನ ಸೋದರಿ ಅನ್ನಾ ಸಹಾಯದಿಂದ, ಬ್ಲ್ಯಾಕ್ವೆಲ್ ಕೆಂಟುಕಿಯ ಹೆಂಡರ್ಸನ್ನಲ್ಲಿ ವರ್ಷಕ್ಕೆ 400 ಡಾಲರ್ ಪಾವತಿಸುವ ಬೋಧನಾ ಕೆಲಸಕ್ಕೆ ಸೇರಿದರು. ಅವರು ತನ್ನ ಕೆಲಸದಿಂದ ತೃಪ್ತಿ ಹೊಂದಿದ್ದರೂ. ಶಾಲೆಯಲ್ಲಿ ವಸತಿ ಮತ್ತು ಬೋಧನಾ ಕೊಠಡಿಗೆ ಕೊರತೆಯಿತ್ತು. ಗುಲಾಮಗಿರಿಯ ನೈಜತೆಯನ್ನು ಕಂಡು ಅತೀವವಾಗಿ ಕದಡಿದರು ಮತ್ತು ಕೆಲಸಕ್ಕೆ ರಾಜೀನಾಮೆ ನೀಡಿದರು[5] ಅವಳು ಸಿನ್ಸಿನ್ನಾಟಿಗೆ ಮರಳಿದಳು ಮತ್ತು ತನ್ನ ಜೀವನವನ್ನು ಕಳೆಯಲು ಹೆಚ್ಚು ಉತ್ತೇಜಿಸುವ ಮಾರ್ಗ ಹುಡುಕಿದರು[6]

ಶಿಕ್ಷಣ[edit]

ಮತ್ತೊಮ್ಮೆ, ತನ್ನ ಸಹೋದರಿ ಅಣ್ಣಾ ಮೂಲಕ, ಬ್ಲ್ಯಾಕ್ವೆಲ್ ಅವರು ಕೆಲಸವನ್ನು ಹುಡುಕಿಕೊಂಡರು, ಈ ಬಾರಿ ಉತ್ತರ ಕೆರೊಲಿನಾದ ಆಶಾವಿಲ್ಲೆ ಅಕಾಡೆಮಿಯೊಂದರಲ್ಲಿ ಸಂಗೀತವನ್ನು ಕಲಿಸತೊಡಗಿದರು. ಅವರು ವೈದ್ಯಕೀಯ ಕಾಲೇಜಿನ ವೆಚ್ಚಗಳಿಗಾಗಿ ೩೦೦೦ ಡಾಲರ್ ನಷ್ಟು ಹಣವನ್ನು ಉಳಿಸುವ ಗುರಿಯನ್ನು ಹೊಂದಿದ್ದರು. ಆಶೆವಿಲೆಯಲ್ಲಿ ಬ್ಲ್ಯಾಕ್ವೆಲ್ ಗೌರವಾನ್ವಿತ ರೆವರೆಂಡ್ ಜಾನ್ ಡಿಕ್ಸನ್ ಜೊತೆ ಸೇರಿಕೊಂಡರು, ಅವರು ಪಾದ್ರಿಯಾಗುವ ಮುಂಚೆಯೇ ಒಬ್ಬ ವೈದ್ಯರಾಗಿದ್ದರು. ಡಿಕ್ಸನ್ ಬ್ಲ್ಯಾಕ್ವೆಲಾರ ವೃತ್ತಿಜೀವನದ ಆಕಾಂಕ್ಷೆಗಳನ್ನು ಅನುಮೋದಿಸಿ, ತನ್ನ ಗ್ರಂಥಾಲಯದಲ್ಲಿ ವೈದ್ಯಕೀಯ ಪುಸ್ತಕಗಳನ್ನು ಅಧ್ಯಯನ ಮಾಡಲು ಅನುಮತಿಸಿದರು. ಈ ಸಮಯದಲ್ಲಿ, ಬ್ಲ್ಯಾಕ್ವೆಲ್ ತನ್ನ ಆಯ್ಕೆಯ ಬಗ್ಗೆ ಮತ್ತು ಅವಳ ಧಾರ್ಮಿಕ ಚಿಂತನೆಯೊಂದಿಗೆ ತನ್ನ ಒಂಟಿತನ ಬಗ್ಗೆ ತನ್ನ ಅನುಮಾನಗಳನ್ನು ಶಮನಗೊಳಿಸಿದರು. ಗುಲಾಮರಿಗಾಗಿ ಭಾನುವಾರದ ಶಾಲೆಯನ್ನು ಆರಂಭಿಸಿದರು, ಅದು ಅಂತಿಮವಾಗಿ ಅದು ವಿಫಲವಾಯಿತು[7].

ಶೀಘ್ರದಲ್ಲೇ ಡಿಕ್ಸನ್ನರ ಶಾಲೆಯು ಮುಚ್ಚಲ್ಪಟ್ಟಿತು ಮತ್ತು ಬ್ಲ್ಯಾಕ್ವೆಲ್ ರೆವರೆಂಡ್ ಡಿಕ್ಸನ್ನರ ಸಹೋದರ ಸ್ಯಾಮ್ಯುಯೆಲ್ ಹೆನ್ರಿ ಡಿಕ್ಸನ್ ಎಂಬ ವೈದ್ಯರ ನಿವಾಸಕ್ಕೆ ಸ್ಥಳಾಂತರಗೊಂಡರು. ಅವರು ೧೮೪೬ ರಲ್ಲಿ ಬೋರ್ಡಿಂಗ್ ಶಾಲೆಯಲ್ಲಿ ಬೋಧನೆ ಪ್ರಾರಂಭಿಸಿದರು. ರೆವೆರೆಂಡ್ ಡಿಕ್ಸನ್ನರ ಸಹೋದರನ ಸಹಾಯದಿಂದ, ಬ್ಲ್ಯಾಕ್ವೆಲ್ ಪತ್ರಗಳ ಮೂಲಕ ವೈದ್ಯಕೀಯ ಅಧ್ಯಯನದ ಸಾಧ್ಯತೆಯ ಬಗ್ಗೆ ವಿಚಾರಿಸಿದರು, ಯಾವುದೇ ಅನುಕೂಲಕರ ಪ್ರತಿಕ್ರಿಯೆಗಳಿಲ್ಲ. 1847 ರಲ್ಲಿ, ಬ್ಲ್ಯಾಕ್ವೆಲ್ ಫಿಲಡೆಲ್ಫಿಯಾ ಮತ್ತು ನ್ಯೂಯಾರ್ಕ್ ಗೆ ವೈದ್ಯಕೀಯ ಅಧ್ಯಯನದ ಅವಕಾಶಗಳನ್ನು ಹುಡುಕಿಕೊಂಡು ಹೊದರು[8]

ಫಿಲಡೆಲ್ಫಿಯಾವನ್ನು ತಲುಪಿದ ನಂತರ ಬ್ಲ್ಯಾಕ್ವೆಲ್, ಡಾ. ವಿಲಿಯಂ ಎಲ್ಡರ್ ಜೊತೆ ಸೇರಿಕೊಂಡು ಡಾ. ಜೋನಾಥನ್ ಎಮ್. ಅಲೆನ್ನೊಂದಿಗೆ ಅಂಗರಚನಾಶಾಸ್ತ್ರವನ್ನು ಖಾಸಗಿಯಾಗಿ ಅಧ್ಯಯನ ಮಾಡಿ ಫಿಲಡೆಲ್ಫಿಯಾದಲ್ಲಿನ ವೈದ್ಯಕೀಯ ಕಾಲೇಜುನಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸಿದಳು. ಅವಳು ಎಲ್ಲೆಡೆ ಪ್ರತಿರೋಧವನ್ನು ಎದುರಿಸುತ್ತಿದ್ದಳು. ಹೆಚ್ಚಿನ ವೈದ್ಯರು ಅಧ್ಯಯನ ಮಾಡಲು ಪ್ಯಾರಿಸ್ಗೆ ಹೋಗು ಅಥವಾ ಪುರುಷ ವೇಷ ಹಾಕಿಕೊಳ್ಳು ಎಂದು ಶಿಫಾರಸು ಮಾಡಿದರು. ಇದಕ್ಕೆ ಕಾರಣವೆಂದರೆ ಅವರು ಮಹಿಳೆ ಮತ್ತು ಬೌದ್ಧಿಕವಾಗಿ ಕೆಳಮಟ್ಟದರೆಂಬುದು. ಅವರು ಹನ್ನೆರಡು ದೇಶದ ಶಾಲೆಗಳಿಗೆ ಅರ್ಜಿ ಸಲ್ಲಿಸಿದರು[9]

ಅಮೆರಿಕದಲ್ಲಿ ವೈದ್ಯಕೀಯ ಶಿಕ್ಷಣ[edit]

ಅಕ್ಟೋಬರ್ 1847 ರಲ್ಲಿ ಬ್ಲ್ಯಾಕ್ವೆಲಾರನ್ನು ಹೋಬಾರ್ಟ್ ಕಾಲೇಜ್ ವೈದ್ಯಕೀಯ ವಿದ್ಯಾರ್ಥಿಯಾಗಿ ಅಂಗೀಕರಿಸಲಾಯಿತು, ನಂತರ ಇದನ್ನು ಜಿನೀವಾ ಮೆಡಿಕಲ್ ಕಾಲೇಜ್ ಎಂದು ಕರೆಯಲಾಗುತ್ತಿತ್ತು. ಮೆಟ್ರಿಕ್ಯೂಲೇಷನ್ ಗೆ ಅರ್ಜಿದಾರರನ್ನು ಮೌಲ್ಯಮಾಪನ ಮಾಡಲು ಸಾಮಾನ್ಯವಾಗಿ ಜವಾಬ್ದಾರಿಯನ್ನು ಹೊಂದಿರುವ ಡೀನ್ ಮತ್ತು ಬೋಧಕವರ್ಗ, ಬ್ಲ್ಯಾಕ್ವೆಲ್ ಪ್ರಕರಣದ ವಿಶೇಷ ಸ್ವರೂಪದ ಕಾರಣದಿಂದಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಒಬ್ಬ ವಿದ್ಯಾರ್ಥಿಯು ಅವಳ ಅರ್ಜಿಯನ್ನು ಆಕ್ಷೇಪಿಸಿದ, ಬ್ಲ್ಯಾಕ್ವೆಲ ಪ್ರಕರಣವನ್ನು ಮತಕ್ಕೆ ಹಾಕಿದರು, ೧೫೦ ಯುವಕರು ಒಪ್ಪಿಕೊಳ್ಳಲು, ಅವಳ ಅರ್ಜಿಯನ್ನು ಅನುಮೊದಿಸಿದರು [10] [11]

ಬ್ಲ್ಯಾಕ್ವೆಲ್ ಕಾಲೇಜಿಗೆ ಹೆದರಿಕೆಯಿಂದ ಆಗಮಿಸಿದರು, ಅವರ್ತಿಗೆ ಸುತ್ತಮುತ್ತಲಿನ ವಿದ್ಯಾರ್ಥಿಗಳು ಮತ್ತು ಬೋಧಕವರ್ಗ ಏನೂ ತಿಳಿದಿರಲಿಲ್ಲ. ತನ್ನ ಪುಸ್ತಕಗಳನ್ನು ಎಲ್ಲಿ ಪಡೆಯಬೇಕೆಂದು ಅವಳು ತಿಳಿದಿರಲಿಲ್ಲ. ಆದಾಗ್ಯೂ, ಅವರು ಶೀಘ್ರದಲ್ಲೇ ವೈದ್ಯಕೀಯ ಶಾಲೆಗೆ ಹೊಂದಿಕೊಂಡರು. ಅವರನ್ನು ಜಿನೀವಾ ಪಟ್ಟಣದ ಜನರು ವಿಚಿತ್ರವಾಗಿ ನೋಡುತ್ತಿದ್ದಳು. ತಾನೇ ಪ್ರತ್ಯೇಕವಾಗಿರಲು ನಿರ್ಧರಿಸಿ ಸ್ನೇಹಿತರನ್ನು ತಿರಸ್ಕರಿಸಿದಳು. ಜಿನೀವಾದಲ್ಲಿ ಎರಡು ಅವಧಿಗಳ ನಡುವಿನ ಬೇಸಿಗೆಯಲ್ಲಿ ಅವಳು ಫಿಲಡೆಲ್ಫಿಯಾಗೆ ಹಿಂದಿರುಗಿದಳು. ಡಾ. ಎಲ್ಡರ್ ಜೊತೆಗೆ ಪ್ರಾಯೋಗಿಕ ಅನುಭವವನ್ನು ಪಡೆಯಲು ವೈದ್ಯಕೀಯ ಸ್ಥಾನಗಳಿಗೆ ಅರ್ಜಿ ಸಲ್ಲಿಸಿದರು. ಬ್ಲಾಕ್ಲೇ ಆಲ್ಮ್ಹೌಸ್ನಲ್ಲಿ ನಡೆಯುತ್ತಿದ್ದ ಸಿಟಿ ಆಯೋಗವು ಕೆಲಸ ಮಾಡಲು ತನ್ನ ಅನುಮತಿಯನ್ನು ನೀಡಿತು. ಆದರೂ ಕೆಲವು ಯುವ ವೈದ್ಯರು ಅವಳ ರೋಗಿಗಳಿಗೆ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಸಹಾಯ ಮಾಡಲು ನಿರಾಕರಿಸುತ್ತಿದರು. ಅಲ್ಲಿನ ಸಮಯದಲ್ಲಿ, ಬ್ಲ್ಯಾಕ್ವೆಲ್ ಮೌಲ್ಯಯುತವಾದ ವೈದ್ಯಕೀಯ ಅನುಭವವನ್ನು ಪಡೆದರು [12].

ಜನವರಿ ೨೩, ೧೮೪೯ ರಂದು ಎಲಿಜಬೆತ್ ಬ್ಲ್ಯಾಕ್ವೆಲ್ ಯುನೈಟೆಡ್ ಸ್ಟೇಟ್ಸ್ನಲ್ಲಿ ವೈದ್ಯಕೀಯ ಪದವಿಯನ್ನು ಪಡೆದುಕೊಂಡ ಮೊದಲ ಮಹಿಳೆಯಾಗಿದ್ದರು. ಡೀನ್ ಡಾ. ಚಾರ್ಲ್ಸ್ ಲೀ ಅವರು ಪದವಿಯನ್ನು ನೀಡಿದರು,ಸ್ಥಳೀಯ ಮಾಧ್ಯಮವು ಅವರ ಪದವಿಯನ್ನು ವರದಿ ಮಾಡಿತು.


ಯುರೋಪಿನಲ್ಲಿ ವೈದ್ಯಕೀಯ ಶಿಕ್ಷಣ[edit]

ಏಪ್ರಿಲ್ ೧೮೪೯ ರಲ್ಲಿ, ಬ್ಲ್ಯಾಕ್ವೆಲ್ ಯುರೋಪಿನಲ್ಲಿ ತನ್ನ ಅಧ್ಯಯನಗಳನ್ನು ಮುಂದುವರೆಸುವ ನಿರ್ಧಾರವನ್ನು ಮಾಡಿದರು. ಅವರು ಬ್ರಿಟನಿನಲ್ಲಿ ಕೆಲವು ಆಸ್ಪತ್ರೆಗಳನ್ನು ಭೇಟಿ ಮಾಡಿದರು ಮತ್ತು ನಂತರ ಪ್ಯಾರಿಸ್ ಗೆ ತೆರಳಿದರು. ಅವರು ಮಹಿಳಎಂಬ ಕಾರಣದಿಂದ ಅನೇಕ ಆಸ್ಪತ್ರೆಗಳಿಂದ ತಿರಸ್ಕರಿಸಲ್ಪಟ್ಟರು. ಜೂನ್ ತಿಂಗಳಲ್ಲಿ, ಬ್ಲ್ಯಾಕ್ವೆಲ್ ಲಾ ಮಟರ್ನಿಟಿ ಆಸ್ಪತ್ರೆಗೆ ವೈದ್ಯರಾದೆ ಕೇವಲ ವೈದ್ಯಕೀಯ ಸೂಲಗಿತ್ತಿಯಾಗಿ ಸೇರಿಕೊಂಡರು.[6]. ಅವರು ಲಾ ಮ್ಯಾಟರ್ನಿಟೆಯಲ್ಲಿನ ಯುವ ವೈದ್ಯ ಹಿಪ್ಪೊಲೈಟ್ ಬ್ಲಾಟ್ ಪರಿಚಯವನ್ನು ಮಾಡಿದರು. ಅವರ ಮಾರ್ಗದರ್ಶನ ಮತ್ತು ತರಬೇತಿಯ ಮೂಲಕ ಬ್ಲ್ಯಾಕ್ವೆಲ್ ಹೆಚ್ಚು ವೈದ್ಯಕೀಯ ಅನುಭವವನ್ನು ಪಡೆದರು. ವರ್ಷದ ಅಂತ್ಯದ ವೇಳೆಗೆ, ಅಗ್ರಗಣ್ಯ ಪ್ರಸೂತಿಗಾರ ಪೌಲ್ ಡುಬೋಯಿಸ್ ಅವರು ಬ್ಲ್ಯಾಕ್ವೆಲ್ ಅತ್ಯುತ್ತಮ ಪ್ರಸೂತಿಕಾರನಾಗುತ್ತಾರೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು[13]

4 ನವೆಂಬರ್ 1849 ರಲ್ಲಿ, ಬ್ಲ್ಯಾಕ್ವೆಲ್ ಶಿಶುಗಳ ನೇತ್ರಗಳಿಗೆ ನಿಯೋಟರೇಟಮ್ ಚಿಕಿತ್ಸೆ ನೀಡುತ್ತಿರುವಾಗ, ಆಕಸ್ಮಿಕವಾಗಿ ಅವರ ಕಣ್ಣಿಗೆ ಕೆಲವು ರಾಸಯನಿಕಗಳು ಸೋಂಕು ಉಂಟಾಯಿತ್ತು. ಇದರಿಂದಾಗಿ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಮತ್ತು ಎಡ ಕಣ್ಣಿನ ದೃಷ್ಟಿ ಕಳೆದುಕೊಂಡರು, ಹೀಗಾಗಿ ಶಸ್ತ್ರಚಿಕಿತ್ಸಕಿಯಾಗುವ ಎಲ್ಲ ಭರವಸೆ ಕಳೆದುಕೊಂಡರು[14]. ಚೇತರಿಕೆಯ ನಂತರ, ಅವರು 1850 ರಲ್ಲಿ ಲಂಡನಿನ ಸೇಂಟ್ ಬಾರ್ಥೊಲೊಮೆವ್ ಆಸ್ಪತ್ರೆಯಲ್ಲಿ ಸೇರಿಕೊಂಡರು. ಅವರು ನಿಯಮಿತವಾಗಿ ಜೇಮ್ಸ್ ಪ್ಯಾಗೆಟ್ ಅವರ ಉಪನ್ಯಾಸಗಳಿಗೆ ಹಾಜರಾಗಿದ್ದರು. ಅವರು ವಾರ್ಡ್ಗ ವೀಕ್ಷಿಸಲು ಪ್ರಯತ್ನಿಸಿದಾಗ ಕೆಲವು ವಿರೋಧವನ್ನು ಎದುರಿಸುತ್ತಿದ್ದರೂ. [1] 1851 ರಲ್ಲಿ ತನ್ನ ಸ್ವಂತ ಅಭ್ಯಾಸವನ್ನು ಸ್ಥಾಪಿಸುವ ಭರವಸೆಯೊಂದಿಗೆ ನ್ಯೂಯಾರ್ಕ್ ನಗರಕ್ಕೆ ಹಿಂದಿರುಗಿದಳು[15].


ಅಮೆರಿಕದಲ್ಲಿ ವೈದ್ಯಕೀಯ ವೃತ್ತಿ[edit]

ಅಮೆರಿಕಾ ಸಂಯುಕ್ತ ಸಂಸ್ಥಾನದ ಬ್ಲ್ಯಾಕ್ವೆಲ್ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು, ಆದರೆ ನ್ಯೂಯಾರ್ಕ್ ಟ್ರಿಬ್ಯೂನ್ ನಂತಹ ಕೆಲವು ಮಾಧ್ಯಮ ಬೆಂಬಲವನ್ನು ಪಡೆದುಕೊಳ್ಳಲು ಸಾಧ್ಯವಾಯಿತು[16] ಅವರು ಕೆಲವೇ ಕೆಲವು ರೋಗಿಗಳನ್ನು ಹೊಂದಿದ್ದಳು. 1852 ರಲ್ಲಿ ಅವರು ಉಪನ್ಯಾಸಗಳನ್ನು ನೀಡಲಾರಂಭಿಸಿದರು ಮತ್ತು ದಿ ಲಾಸ್ ಆಫ್ ಲೈಫ್ ಅನ್ನು ಪ್ರಕಟಿಸಿದರು. ಬ್ಲ್ಯಾಕ್ವೆಲ್ ಮದುವೆಯಾಗದೆ ಉಳಿದರು. ೧೮೫೩ರಲ್ಲಿ, ಬ್ಲಾಕ್ವೆಲ್ ಟಾಂಪ್ಕಿನ್ಸ್ ಸ್ಕ್ವೇರ್ ಬಳಿ ಸಣ್ಣ ಔಷಧಾಲಯವನ್ನು ಸ್ಥಾಪಿಸಿದರು. ಪೋಲಿಷ್ ಮಹಿಳೆಯಾಗಿದ್ದ ಮೇರಿ ಝರ್ಜೆಸ್ಕ ಅವರು ವೈದ್ಯಕೀಯ ಶಿಕ್ಷಣವನ್ನು ಮುಂದುವರೆಸಲು ಮಾರ್ಗದರ್ಶನ ಮಾಡಿದರು. 1857 ರಲ್ಲಿ ಬ್ಲ್ಯಾಕ್ವೆಲ್ ಮತ್ತು ಅವಳ ಸಹೋದರಿ ಎಮಿಲಿ ಜೊತೆಯಲ್ಲಿ ಡಾ. ಮೇರಿ ಝರ್ಜೆಸ್ಕ ಅವರು ವೈದ್ಯಕೀಯ ಪದವಿಯನ್ನು ಪಡೆದರು. ಬ್ಲ್ಯಾಕ್ವೆಲ್ ಮೂಲ ಔಷಧಾಲಯವನ್ನು ನ್ಯೂಯಾರ್ಕ್ ಮಹಿಳಾ ಮತ್ತು ಮಕ್ಕಳನ್ನು ಆಸ್ಪತ್ರೆಗೆ ವಿಸ್ತರಿಸಿದರು. ಸಂಸ್ಥೆಯು ಉತ್ತಮವಾಗಿಬೆಳೆಯಿತು[17].

ಅಮೆರಿಕನ್ ಅಂತರ್ಯುದ್ಧದ ಸಮಯ[edit]

ಅಮೆರಿಕನ್ ಅಂತರ್ಯುದ್ಧದಲ್ಲಿ, ಬ್ಲ್ಯಾಕ್ವೆಲ್ ಸಹೋದರಿಯರು ಶುಶ್ರೂಷಾ ಪ್ರಯತ್ನದಲ್ಲಿ ನೆರವು ನೀಡಿದರು. ಅದರು ಪುರುಷ ಪ್ರಾಬಲ್ಯದ ಅಮೆರಿಕದ ನೈರ್ಮಲ್ಯ ಕಮಿಷನ್ ನಿಂದ ಕೆಲವು ಪ್ರತಿರೋಧವನ್ನು ಎದುರಿಸಿದರು. ಪುರುಷ ವೈದ್ಯರು ಬ್ಲ್ಯಾಕ್ವೆಲ್ಸ್ನಲ್ಲಿ ತೊಡಗಿದರೆ ನರ್ಸ್ ಶಿಕ್ಷಣ ಯೋಜನೆಗೆ ಸಹಾಯ ಮಾಡಲು ನಿರಾಕರಿಸಿದರು. ಅಮೆರಿಕದ ನೈರ್ಮಲ್ಯ ಕಮಿಷನ್ ಪ್ರತಿಕ್ರಿಯೆಯಾಗಿ, ಬ್ಲ್ಯಾಕ್ವೆಲ್ ವುಮನ್'ಸ್ ಸೆಂಟ್ರಲ್ ರಿಲೀಫ್ ಅಸೋಸಿಯೇಷನ್ ಆಯೋಜಿಸಿದ್ದರು.

ಮನೆಯಲ್ಲಿ ಮತ್ತು ವಿದೇಶದಲ್ಲಿ ವೈದ್ಯಕೀಯ ವೃತ್ತಿಜೀವನ[edit]

ಬ್ಲಾಕ್ವೆಲ್ ಹಣವನ್ನು ಸಂಗ್ರಹಿಸಲು ಮತ್ತು ಅಲ್ಲಿ ಒಂದು ಸಮಾನಾಂತರ ಆಸ್ಪತ್ರೆ ಸ್ಥಾಪಿಸಲು ಪ್ರಯತ್ನಿಸಲು ಬ್ರಿಟನ್ ಗೆ ಹಲವಾರು ಪ್ರವಾಸಗಳನ್ನು ಮಾಡಿದರು. ಬ್ರಿಟನ್ ೧೮೫೮ರ ಮೆಡಿಕಲ್ ಆಕ್ಟ್ ಪ್ರಕಾರ, ಜನರಲ್ ಮೆಡಿಕಲ್ ಕೌನ್ಸಿಲ್ ವೈದ್ಯಕೀಯ ದಾಖಲೆಯಲ್ಲಿ (೧ ಜನವರಿ ೧೮೫೯) ಬ್ಲಾಕ್ವೆಲ್ ಹೆಸರನ್ನು ನಮೂದಿಸಿದ ಮೊದಲ ಮಹಿಳೆಯಾದರು. [11] ಈ ಸಮಯದಲ್ಲಿ ಅವರು ಎಲಿಜಬೆತ್ ಗ್ಯಾರೆಟ್ ಆಂಡರ್ಸನ್ ಅವರಿಗೆ ಮಾರ್ಗದರ್ಶಿಯಾದರು. ೧೮೬೬ ರ ಹೊತ್ತಿಗೆ, ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ಸುಮಾರು ೭೦೦೦ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತು ಮತ್ತು ಅಮೆರಿಕದಲ್ಲಿ ಬ್ಲ್ಯಾಕ್ವೆಲ್ ರ ಅಗತ್ಯವಿತ್ತು. ೧೮೬೮ ರಲ್ಲಿ, ನ್ಯೂಯಾರ್ಕ್ ನಲ್ಲಿ ಮಹಿಳೆಯರಿಗೆ ವೈದ್ಯಕೀಯ ಕಾಲೇಜು ಸ್ಥಾಪಿಸಲಾಯಿತು. ಇದು ವೈದ್ಯಕೀಯ ಶಿಕ್ಷಣದ ಬಗ್ಗೆ ಬ್ಲ್ಯಾಕ್ವೆಲ್ನ ನವೀನ ಪರಿಕಲ್ಪನೆಗಳನ್ನು ಒಳಗೊಂಡಿತ್ತು[18].

೧೮೭೪ ರಲ್ಲಿ, ಬ್ಲ್ಯಾಕ್ವೆಲ್ ಲಂಡನಿನಲ್ಲಿ ಮಹಿಳಾ ವೈದ್ಯಕೀಯ ಶಾಲೆಯನ್ನು ಸೋಫಿಯಾ ಜೆಕ್ಸ್-ಬ್ಲೇಕ್ ಅವರೊಂದಿತೆ ಸೇರಿ ಸ್ಥಾಪಿಸಿದರು. ಮುಂದೆ ಇದು 1874 ರಲ್ಲಿ ಲಂಡನ್ ಸ್ಕೂಲ್ ಆಫ್ ಮೆಡಿಸಿನ್ ಫಾರ್ ವುಮೆನ್ ಆಗಿ ತೆರೆಯಲ್ಪಟ್ಟಿತು. ಶಾಲೆಯ ಸ್ಥಾಪನೆಯ ನಂತರ, ಬ್ಲ್ಯಾಕ್ವೆಲ್ ಮಿಡ್ವೈಫರಿಯಲ್ಲಿ ಉಪನ್ಯಾಸಕರಾಗಿ ಆಯ್ಕೆಯಾಯಿತು. ಅವರು ೧೮೭೭ ರಲ್ಲಿ ಈ ಸ್ಥಾನವನ್ನು ರಾಜೀನಾಮೆ ನೀಡಿದರು, ಅಧಿಕೃತವಾಗಿ ತನ್ನ ವೈದ್ಯಕೀಯ ವೃತ್ತಿಜೀವನದಿಂದ ನಿವೃತ್ತರಾದರು[19].


ಸಾಮಾಜಿಕ ಮತ್ತು ನೈತಿಕ ಸುಧಾರಣೆ[edit]

೧೮೬೯ ರಲ್ಲಿ ಬ್ರಿಟನ್ಗೆ ಹೊರಟ ನಂತರ, ಬ್ಲ್ಯಾಕ್ವೆಲ್ ತನ್ನ ಹಿತಾಸಕ್ತಿಗಳನ್ನು ಸಾಮಾಜಿಕ ಸುಧಾರಣೆ ಮತ್ತು ಕರ್ತೃತ್ವದಲ್ಲಿ ತೊಡಗಿಸಿದರು. ಅವರು ೧೮೭೧ರಲ್ಲಿ ನ್ಯಾಷನಲ್ ಹೆಲ್ತ್ ಸೊಸೈಟಿಯನ್ನು ಸಂಸ್ಥಾಪಿಸಿದರು. ಸುಧಾರಣೆ ಮತ್ತು ಬೌದ್ಧಿಕ ಇದಕ್ಕೆ ಅಮೇರಿಕನ್ ಹೂಡಿಕೆದಾರರು ಬೆಂಬಲ ನಿಡಿದರು. ಈ ವರ್ಷಗಳಲ್ಲಿ ಅವರು ಇಂಗ್ಲೆಂಡ್, ಫ್ರಾನ್ಸ್, ವೇಲ್ಸ್, ಸ್ವಿಟ್ಜರ್ಲ್ಯಾಂಡ್ ಮತ್ತು ಇಟಲಿಯಲ್ಲಿ ಹಲವು ಬಾರಿ ಯುರೋಪಿನಾದ್ಯಂತ ಪ್ರಯಾಣ ಬೆಳೆಸಿದರು[20].

೧೮೮೦-೧೮೯೫ರ ಅವಧಿಯಲ್ಲಿ ವೈದ್ಯಕೀಯ ವೃತ್ತಿಜೀವನದಿಂದ ನಿವೃತ್ತಿಯ ನಂತರ ಅವರ ಸಾಮಾಜಿಕ ಸುಧಾರಣೆಯ ಕಾರ್ಯದಲ್ಲಿ ತೊಡಗಿದರು, ಮುಖ್ಯವಾಗಿ ನೈತಿಕ ಸುಧಾರಣೆ, ಲೈಂಗಿಕ ಶುದ್ಧತೆ, ನೈರ್ಮಲ್ಯ, ವೈದ್ಯಕೀಯ ಶಿಕ್ಷಣ, ಔಷಧ, ಸುಜನನಶಾಸ್ತ್ರ, ಕುಟುಂಬ ಯೋಜನೆ, ಮಹಿಳಾ ಹಕ್ಕುಗಳು ಹಿಗೆ ಹಲವು ವಿಚಾರಗಳಲ್ಲಿ ಸುಧಾರಣೆಗಾಗಿ ಚಳವಳಿಗಳಿಗ ನಡೆಸಿದರು. ಅವರು ವೇಶ್ಯಾವಾಟಿಕೆ ಮತ್ತು ಗರ್ಭನಿರೋಧಕಗಳ ವಿರುದ್ಧ ಹೆಚ್ಚಾಗಿ ಪ್ರಚಾರ ಮಾಡಿದರು [15] ಅವರು ವೇಶ್ಯಾವಾಟಿಕೆ ರೋಗಗಳ ಬಗ್ಗೆ ಪ್ರಚಾರ ಮಾಡಿದರು.

ವೈಯಕ್ತಿಕ ಜೀವನ[edit]

ಐದು ಬ್ಲ್ಯಾಕ್ವೆಲ್ ಸಹೋದರಿಯರು ಎಂದಿಗೂ ಮದುವೆಯಾಗಲಿಲ್ಲ. 1856 ರಲ್ಲಿ, ಬ್ಲ್ಯಾಕ್ವೆಲ್ ನ್ಯೂಯಾರ್ಕ್ ಆಸ್ಪತ್ರೆ ಸ್ಥಾಪಿಸಿದಾಗ, ಕ್ಯಾಂಡರಿನ್ "ಕಿಟ್ಟಿ" ಬ್ಯಾರಿ (೧೮೪೮-೧೯೩೬), ಎಂಬ ಐರಿಶ್ ರಾಂಡಲ್ಸ್ ದ್ವೀಪದ ಅನಾಥ ಮಗುವನ್ನು ಅಳವಡಿಸಿಕೊಂಡಳು ಮತ್ತು ಅವಳಿಗೆ ಶಿಕ್ಷಣ ನೀಡಿದರು. ಬ್ಯಾರಿ ಬ್ಲ್ಯಾಕ್ವೆಲ್ ಅವರ ಜೀವನಪರ್ಯಂತ ಜೊತೆಗಿದ್ದರು. ಬ್ಲ್ಯಾಕ್ವೆಲ್ನ ಮರಣದ ನಂತರ, ಬ್ಯಾರಿ ರಾಕ್ ಹೌಸ್ ನಲ್ಲಿ ನೆಲೆಸಿದರು. ವರ್ಜಿನಿಯದ ೨೬ ವರ್ಷದ ವ್ಯಕ್ತಿಯಾದ ಆಲ್ಫ್ರೆಡ್ ಸಾಚ್ಚೆಸ್ ನೊಂದಿನ ಸಂಬಂಧಕ್ಕೆ ಸಂಬಂಧಿಸಿದಂತೆ ಬ್ಲ್ಯಾಕ್ವೆಲ್ನ ಜೀವನದಲ್ಲಿ ಸ್ವಲ್ಪ ವಿವಾದವಿದೆ. ವಾಸ್ತವದಲ್ಲಿ ಬ್ಲ್ಯಾಕ್ವೆಲ್ ಮತ್ತು ಸಾಚ್ಚೆಸ್ ತುಂಬಾ ನಿಕಟರಾಗಿದ್ದರು ಹಾಗೂ ಸಾಚ್ಚೆಸ್ ಬ್ಲ್ಯಾಕ್ವೆಲ್ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು.


ಕೊನೆಯ ವರ್ಷಗಳು ಮತ್ತು ಸಾವು[edit]

ಬ್ಲ್ಯಾಕ್ವೆಲ್. ೧೮೯೫ ರಲ್ಲಿ, ತನ್ನ ಆತ್ಮಚರಿತ್ರೆ ಪಯೋನಿಯರ್ ವರ್ಕ್ ಅನ್ನು ಪ್ರಕಟಿಸಿದರು. ಇದು 500 ಕ್ಕೂ ಕಡಿಮೆ ಪ್ರತಿಗಳನ್ನು ಮಾರಾಟವಾಗುವ ಮೂಲಕ ಯಶಸ್ವಿಯಾಗಲಿಲ್ಲ. ಈ ಪ್ರಕಟಣೆಯ ನಂತರ, ಬ್ಲ್ಯಾಕ್ವೆಲ್ ತನ್ನ ಸಾರ್ವಜನಿಕ ಸುಧಾರಣಾ ಉಪಸ್ಥಿತಿಯನ್ನು ನಿಧಾನವಾಗಿ ಬಿಟ್ಟುಬಿಟ್ಟರು ಮತ್ತು ಹೆಚ್ಚು ಸಮಯ ಪ್ರಯಾಣಿಸುತ್ತಿದ್ದರು. ಅವರು ೧೯೦೬ ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದರು ಮತ್ತು ಅವರ ಮೊದಲ ಮತ್ತು ಕೊನೆಯ ಕಾರ್ ಸವಾರಿಗಳನ್ನು ಮಾಡಿದರು. ಬ್ಲ್ಯಾಕ್ವೆಲ್ನ ವೃದ್ಧಾಪ್ಯವು ಅವರ ಚಟುವಟಿಕೆಗಳನ್ನು ಮಿತಿಗೊಳಿಸಲು ಪ್ರಾರಂಭಿಸಿತು[21].

1907 ರಲ್ಲಿ, ಸ್ಕಾಟಲ್ಯಾಂಡನ, ಕಿಲ್ಮುನ್ ನಲ್ಲಿ ರಜಾದಿನಗಳಲ್ಲಿ ಬ್ಲ್ಯಾಕ್ವೆಲ್ ಮೆಟ್ಟಿಲುಗಳಿಂದ ಬಿದ್ದು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಪೂರ್ಣವಾಗಿ ನಿಷ್ಕ್ರಿಯಗೊಂಡರು. [23] ಮೇ ೩೧, ೧೯೧೦ ರಂದು, ಹೇಸ್ಟಿಂಗ್ ನಲ್ಲಿರುವ ತಮ್ಮ ಮನೆಯಲ್ಲಿ ಪಾರ್ಶ್ವವಾಯುವಿನಿಂದ ಮರಣ ಹೊಂದಿದರು. ಆಕೆಯ ಚಿತಾಭಸ್ಮವನ್ನು ಸೇಂಟ್ ಮುನ್ಸ್ ಪ್ಯಾರಿಶ್ ಚರ್ಚ್, ಕಿಲ್ಮುನ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು..


ಬ್ಲ್ಯಾಕ್ವೆಲರ ಗಮನಾರ್ಹ ಬರಹಗಳು, ಪ್ರಕಟನೆಗಳು,ಉಪನ್ಯಾಸಗಳು[edit]

  • 1849 ದಿ ಕಾಸಸ್ ಅಂಡ್ ಟ್ರೀಟ್ಮೆಂಟ್ ಆಫ್ ಟೈಫಸ್, ಅಥವಾ ಶಿಪ್ಫೇವರ್ (ಪ್ರಬಂಧ)
  • 1852 ದಿ ಲಾಸ್ ಆಫ್ ಲೈಫ್ ವಿತ್ ಸ್ಪೆಷಲ್ ರೆಫರೆನ್ಸ್ ಟು ದಿ ಫಿಸಿಕಲ್ ಎಜುಕೇಶನ್ ಆಫ್ ಗರ್ಲ್ಸ್ (ಕರಪತ್ರ, ಉಪನ್ಯಾಸ ಸರಣಿ ಸಂಕಲನ)
  • 1856 ಮಹಿಳೆಯರ ವೈದ್ಯಕೀಯ ಶಿಕ್ಷಣದ ಪರವಾಗಿ ಮನವಿ [26]
  • 1860 ವುಮೆನ್ ಫಾರ್ ಪ್ರೊಫೆಷನ್ ಆಗಿ ಮೆಡಿಸಿನ್ (ಮಹಿಳೆಯರಿಗೆ ನ್ಯೂಯಾರ್ಕ್ ಚಿಕಿತ್ಸಾಲಯದ ಟ್ರಸ್ಟಿಗಳು ಪ್ರಕಟಿಸಿದ ಉಪನ್ಯಾಸ)
  • 1864 ಮಹಿಳೆಯರ ವೈದ್ಯಕೀಯ ಶಿಕ್ಷಣದ ಕುರಿತಾದ ವಿಳಾಸ [27]
  • 1878 ಸೆಕ್ಸ್ಗೆ ಸಂಬಂಧಿಸಿದಂತೆ ತಮ್ಮ ಮಕ್ಕಳ ನೈತಿಕ ಶಿಕ್ಷಣದ ಬಗ್ಗೆ ಪೋಷಕರಿಗೆ ಸಲಹೆ ನೀಡಿ (ಎಂಟು ಆವೃತ್ತಿಗಳು, ಲೈಂಗಿಕತೆಯ ಸಂಬಂಧದಲ್ಲಿ ಯಂಗ್ ನೈತಿಕ ಶಿಕ್ಷಣ ಎಂದು ಮರುಪ್ರಕಟಿಸಿರುವುದು)
  • 1881 "ಔಷಧ ಮತ್ತು ನೈತಿಕತೆ" (ಆಧುನಿಕ ವಿಮರ್ಶೆಯಲ್ಲಿ ಪ್ರಕಟಿಸಲಾಗಿದೆ)
  • 1887 ಮಹಿಳಾ ಖರೀದಿ: ಮಹಾ ಆರ್ಥಿಕ ಪ್ರಮಾದ
  • 1871 ಆರೋಗ್ಯದ ಧರ್ಮ (ಉಪನ್ಯಾಸ ಸರಣಿಯ ಸಂಕಲನ, ಮೂರು ಆವೃತ್ತಿಗಳು) [28]
  • 1888 ಮುನ್ಸಿಪಲ್ ರೆಪ್ರೆಸೆಂಟೇಟಿವ್ ಸರ್ಕಾರದ ಕ್ಷೀಣತೆ - ವೈಯಕ್ತಿಕ ಅನುಭವದ ಅಧ್ಯಾಯ (ನೈತಿಕ ರಿಫಾರ್ಮ್ ಲೀ
  • 1890 ಮೆಡಿಸಿನ್ ವೃತ್ತಿಯಲ್ಲಿ ಮಹಿಳೆಯರ ಪ್ರಭಾವ [32]
  • 1891 ವೈದ್ಯಕೀಯ ಶಿಕ್ಷಣ ಇತ್ಯಾದಿಗಳಲ್ಲಿ ದುರ್ಬಲ ವಿಧಾನ (ಮಹಿಳಾ ಮುದ್ರಣ ಸೊಸೈಟಿ)
  • 1892 ವೈ ಹೈಜೀನಿಕ್ ಕಾಂಗ್ರೆಸ್ಸ್ ಫೇಲ್
  • 1895 ಮಹಿಳಾ ವೈದ್ಯಕೀಯ ವೃತ್ತಿಯನ್ನು ತೆರೆಯುವಲ್ಲಿ ಪಯನೀಯರ್ ಕೆಲಸ - ಆಟೋಬಯಾಗ್ರಫಿಕಲ್ ಸ್ಕೆಚಸ್ (ಲಾಂಗ್ಮನ್ಸ್, ಮರುಮುದ್ರಣ ನ್ಯೂಯಾರ್ಕ್: ಸ್ಕಾಕೆನ್ ಬುಕ್ಸ್, 1977) [33]
  • 1898 ಸೈಕಾಲಜಿ ಮೆಥಡ್ ಇನ್ ಬಯಾಲಜಿ
  • 1902 ವೈದ್ಯಕೀಯ ಸಮಾಜಶಾಸ್ತ್ರದಲ್ಲಿ ಪ್ರಬಂಧಗಳು, 2 ಸಂಪುಟಗಳು (ಅರ್ನೆಸ್ಟ್ ಬೆಲ್)

ಗೌರವಗಳು[edit]

  • ಎಲಿಜಬೆತ್ ಬ್ಲ್ಯಾಕ್ವೆಲ್ ಹೊಬರ್ಟ್ ಮತ್ತು ವಿಲಿಯಮ್ ಸ್ಮಿತ್ ಕಾಲೇಜುಗಳ ಅಲುಮಿನಿಯಗಿದ್ದಾರೆ ಮತ್ತು ಹೋಬಾರ್ಟ್ ಮತ್ತು ವಿಲಿಯಮ್ ಸ್ಮಿತ್ ಕಾಲೇಜಸ್ "ಮಾನವಕುಲದ ಅತ್ಯುತ್ತಮ ಸೇವೆ" ಯನ್ನು ಪ್ರದರ್ಶಿಸಿರುವ ಮಹಿಳೆಯರಿಗೆ ವಾರ್ಷಿಕ ಎಲಿಜಬೆತ್ ಬ್ಲ್ಯಾಕ್ವೆಲ್ ಪ್ರಶಸ್ತಿಯನ್ನು ನೀಡುತ್ತದೆ.
  • 1949 ರಿಂದ, ಅಮೇರಿಕನ್ ಮೆಡಿಕಲ್ ವುಮೆನ್ಸ್ ಅಸೋಸಿಯೇಷನ್ ​​ಎಲಿಜಬೆತ್ ಬ್ಲ್ಯಾಕ್ವೆಲ್ ಪದಕವನ್ನು ವಾರ್ಷಿಕವಾಗಿ ಮಹಿಳಾ ವೈದ್ಯರಿಗೆ ನೀಡುತ್ತದೆ.
  • 2013 ರಲ್ಲಿ ಬ್ರಿಸ್ಟಲ್ ವಿಶ್ವವಿದ್ಯಾಲಯವು ಎಲಿಜಬೆತ್ ಬ್ಲ್ಯಾಕ್ವೆಲ್ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ರಿಸರ್ಚ್ ಅನ್ನು ಪ್ರಾರಂಭಿಸಿತು.
  • ಫೆಬ್ರವರಿ 3, 2018 ರಂದು, ಗೂಗಲ್ ಅವರ 197 ನೇ ಜನ್ಮ ದಿನಾಚರಣೆಯನ್ನು ಗುರುತಿಸಿ ಡೂಡ್ಲ್ ಎಂದು ಗೌರವಿಸಿತು.[37]

ಉಲ್ಲೇಖಗಳು[edit]

  1. ^ Blackwell, Elizabeth, and Millicent Garrett Fawcett. Pioneer Work in Opening the Medical Profession to Women. London: J. M. Dent & Sons, 1914. Print
  2. ^ Kline, Nancy (1997). Elizabeth Blackwell: First Woman M.D. Conari Press. p. 1772. ISBN 9781609254780
  3. ^ Elizabeth Blackwell, Diary, 19–21 December 1838 (Blackwell Family Papers, Library of Congress)
  4. ^ Sahli, Nancy Ann (1982). Elizabeth Blackwell, M.D., (1871–1910): A Biography. New York: Arno Press. ISBN 0-405-14106-8
  5. ^ Blackwell, Elizabeth (1895). Pioneer Work in Opening the Medical Profession to Women: Autobiographical Sketches. London and New York: Longmans, Green, and Co. Retrieved 17 July 2016.
  6. ^ Blackwell, Elizabeth, and Millicent Garrett Fawcett. Pioneer Work in Opening the Medical Profession to Women. London: J. M. Dent & Sons, 1914. Print
  7. ^ Sahli, Nancy Ann (1982). Elizabeth Blackwell, M.D., (1871–1910): A Biography. New York: Arno Press. ISBN 0-405-14106-8
  8. ^ Blackwell, Elizabeth, and Millicent Garrett Fawcett. Pioneer Work in Opening the Medical Profession to Women. London: J. M. Dent & Sons, 1914. Print
  9. ^ Blackwell, Elizabeth, and Millicent Garrett Fawcett. Pioneer Work in Opening the Medical Profession to Women. London: J. M. Dent & Sons, 1914. Print
  10. ^ Curtis, Robert H. (1993). Great Lives: Medicine. New York, New York: Atheneum Books for Young Readers.
  11. ^ Smith, Stephen. Letter. The Medical Co-education of the Sexes. New York Church Union. 1892.
  12. ^ Sahli, Nancy Ann (1982). Elizabeth Blackwell, M.D., (1871–1910): A Biography. New York: Arno Press. ISBN 0-405-14106-8
  13. ^ Blackwell, Elizabeth, and Millicent Garrett Fawcett. Pioneer Work in Opening the Medical Profession to Women. London: J. M. Dent & Sons, 1914. Print
  14. ^ Blackwell, Elizabeth, and Millicent Garrett Fawcett. Pioneer Work in Opening the Medical Profession to Women. London: J. M. Dent & Sons, 1914. Print
  15. ^ Sahli, Nancy Ann (1982). Elizabeth Blackwell, M.D., (1871–1910): A Biography. New York: Arno Press. ISBN 0-405-14106-8
  16. ^ Blackwell, Elizabeth, and Millicent Garrett Fawcett. Pioneer Work in Opening the Medical Profession to Women. London: J. M. Dent & Sons, 1914. Print
  17. ^ Sahli, Nancy Ann (1982). Elizabeth Blackwell, M.D., (1871–1910): A Biography. New York: Arno Press. ISBN 0-405-14106-8
  18. ^ Sahli, Nancy Ann (1982). Elizabeth Blackwell, M.D., (1871–1910): A Biography. New York: Arno Press. ISBN 0-405-14106-8
  19. ^ Sahli, Nancy Ann (1982). Elizabeth Blackwell, M.D., (1871–1910): A Biography. New York: Arno Press. ISBN 0-405-14106-8
  20. ^ Sahli, Nancy Ann (1982). Elizabeth Blackwell, M.D., (1871–1910): A Biography. New York: Arno Press. ISBN 0-405-14106-8
  21. ^ Sahli, Nancy Ann (1982). Elizabeth Blackwell, M.D., (1871–1910): A Biography. New York: Arno Press. ISBN 0-405-14106-8